ಮೊನ್ನೆ ಸೋಮವಾರ ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿದ್ದ ಹಳೆ ಬಾಸ್ ಪೋನ್ ಮಾಡಿದರು. ನಾನು ಆ ಕಂಪನಿಯ ಕೆಲಸ ಬಿಟ್ಟು ಬೇರೆ ಕಂಪನಿ ಸೇರಿದ್ದರು ಅವರಿಗೆ ನನ್ನ ಮೇಲಿನ ಪ್ರೀತಿ ಕಡಮೆಯಾಗಿರಲಿಲ್ಲ.ನಾನು ಕಂಪನಿ ಬಿಟ್ಟು ಕೆಲವು ದಿನಗಳ ನಂತರ ಅವರಿಗೆ ವರ್ಗಾವಣೆಯಾದ ಸುದ್ದಿ ಕೇಳಿದ್ದ ನನಗೆ ಅವರ ಪೋನ್ ಬಂದಿದ್ದರಿಂದ ಸಂತೋಷವಾಯಿತು.ಒಟ್ಟಾರೆ ಆ ಕರೆಯ ಸಾರಾಂಶ ಇಷ್ಟು..... ಅವರ ಈಗಿನ ಕಂಪನಿಯಲ್ಲಿರುವ ಕೆಲಸಗಾರರಿಗೆ ನನಗೆ ಗೊತ್ತಿದ್ದ ಒಂದಷ್ಟು ಕಂಪ್ಯೂಟರ್ ಕೆಲಸ ಕಲಿಸಬೇಕು. ಅದು ಅವರಿಗೆ ಟ್ರೈನಿಂಗ್ ಪ್ರಾರಂಭವಾಗುವ ದಿನದಂದೇ.ಅನಿವಾರ್ಯವಾಗಿ ನಾನು ಒಪ್ಪಲೆಬೇಕಿತ್ತು. ಒಪ್ಪಿದೆ ಕೂಡ. ಹೋಗಿ ಬರುವ ಖರ್ಚು, ಉಳಿದುಕೊಳ್ಳಲು ಲಾಡ್ಜ್ ಎಲ್ಲಾ ವ್ಯವಸ್ಥೆ ಮಾಡಿದ್ದರು. ಊಟಕ್ಕೆ ಅವರ ಮನೆಯೇ ಇತ್ತಲ್ಲ.ಅಂದಹಾಗೆ ಅವರ ಇದ್ದಿದ್ದು ಕಾರವಾರದಲ್ಲಿ. ನನಗೂ ಅಲ್ಲಿಗೆ ಹೋಗಲು ಕಾತರ. ಆ ಸಮುದ್ರದ ದಂಡೆ, ಅಲೆಗಳು ನೆನಸಿಕೊಂಡರೆನೇ ಖುಷಿ.ಅದಕ್ಕೆ ಎರಡು ದಿನ ರಜ ಹಾಕುವ ಬದಲು ನಾಲ್ಕು ದಿನ ರಜ ಹಾಕಿ ಕಾರವಾರಕ್ಕೆ ಹೋಗೋದು ಅಂತ ತೀರ್ಮಾನಿಸಿದೆ. ರಜನೂ ಸಿಕ್ತು. ಹೋಗುವ ದಿನ ಖಾಸಗಿ ಬಸ್್ನಲ್ಲಿ ಸೀಟ್ ರಿಸರ್ವೇಶನ್ ಕೂಡ ಆಯ್ತು.ಅದು ಸ್ಲೀಪಿಂಗ್ ಕೋಚ್. ಉದ್ದಕ್ಕೆ ಮಲಗಿ ಪ್ರಯಾಣ ಆ.. ಹಾ.. ಎಂಥಾ ಖುಷಿ ಅಲ್ವಾ. ನಾನು ಮೊದಲ ಬಾರಿಗೆ ಈ ಸ್ಲೀಪಿಂಗ್ ಕೋಚ್್ನಲ್ಲಿ ಪಯಣಿಸುತ್ತಿದ್ದೆ ಅನ್ನೊದು ಇನ್ನೂ ಖುಷಿ ತಂದಿತ್ತು.ಅಂತೂ ಆ ದಿನ ಬಂತು. ಇಲ್ಲಿಂದ ಸಂಜೆ ಏಳು ಗಂಟೆಗೆ ಪ್ರಯಾಣ. ಸರಿಯಾದ ಸಮಯಕ್ಕೆ ಹೋದೆ. ನನ್ನ ಪ್ರಯಾಣ ಪ್ರಾರಂಭವಾಯಿತು.ಬೆಂಗಳೂರು ಬಿಟ್ಟು ಅರ್ಧ ಗಂಟೆಯಾಗಿರಬಹುದು, ಅಷ್ಟರಲ್ಲೆ ಒಂದು ಜೊಂಪು ನಿದ್ದೆ ಮಾಡಿ ಮುಗಿಸಿದೆ. ಆದರೂ ಕಣ್ಣು ಬಿಟ್ಟು ನೋಡಿದರೆ ಇನ್ನೂ ಬೆಂಗಳೂರು ಎಂಬ ಮಾಯಾನಗರಿಯನ್ನು ದಾಟಿಯೇ ಇರಲಿಲ್ಲ.ಈ ಟ್ರಾಫಿಕ್ ಜಾಮ್್ನಿಂದ ಬೆಂಗಳೂರನ್ನು ರಕ್ಷಿಸಲು ಕೆಂಪೇಗೌಡರೇ ಯಾಕೆ ಸಾಕ್ಷಾತ್ ಆ ಸೃಷ್ಟಿಕರ್ತ ಬಂದರೂ ಸಾಧ್ಯವಿಲ್ಲವೆನೋ ಅಂತ ಯಥಾರೀತಿ ಅಂದುಕೊಂಡು ಮತ್ತೆ
ಮುಸುಗೆಳೆದುಕೊಂಡು ಮಲಗಿದೆ.ತುಮಕೂರಿನ ಹೋಟೆಲ್ ಒಂದರಲ್ಲಿ ಊಟಕ್ಕೆ ನಿಲ್ಲಿಸಿದರು. ಇಳಿದು ತಿಂದುಕೊಂಡು ಬಂದೆ. ಬಸ್ ಹೋರಡಲು ಇನ್ನೂ ಟೈಮ್ ಇತ್ತು. ಪುಸ್ತಕ ತೆಗೆದು ಓದುತಿದ್ದೆ. ಅಷ್ಟರಲ್ಲಿ ಒಂದು ಮಗು ಎತ್ತಿಕೊಂಡು ಒಬ್ಬ ಗೃಹಿಣಿ ಬಂದರು. ಅವರ ಸೀಟ್ ನನ್ನ ಸೀಟ್ ಮೇಲಿತ್ತು.ಅವರ ಬಳಿ ಎರಡು ಬ್ಯಾಗ್ ಲಗೇಜ್ ಇತ್ತು. ಅದಕ್ಕೆ ಅವರಿಗೆ ಮೇಲೆ ಹತ್ತಿ ಮಲಗಲು ಸಾಧ್ಯವಿರಲಿಲ್ಲ. ಹಾಗಾಗಿ ಕಂಡಕ್ಟರ್್ಗೆ ಹೇಳಿದರು ಅನ್ನಿಸುತ್ತೆ, ಕಂಡಕ್ಟರ್ ಬಂದು ನನಗೆ ಕೇಳಿಕೊಂಡಾಗ ನನಗೆ ಇಲ್ಲವೆನ್ನಾಲಾಗಲಿಲ್ಲ.ಆ ಮಗು ತುಂಬಾ ಮುದ್ದಾಗಿತ್ತು. ನಾನು ಅದನ್ನ ಕರೆದೆ, ಅದು ಬಂತು. ಅವರಿಗೆ ಸ್ವಲ್ಪ ಲಗೇಜ್ ಇಡಲು ಅನುಕೂಲವಾಗಲಿ ಅಂತ ಆ ಮಗುವನ್ನ ನಾನೇ ಎತ್ತಿಕೊಂಡು ನನ್ನ ಸೀಟ್ ಮೇಲೆ ಹೋದೆ.ನನ್ನ ಜೇಬ್್ನಿಂದ ಪೆನ್ ತೆಗೆದುಕೊಂಡು ಆಟವಾಡುತ್ತಿತ್ತು. ಮಕ್ಕಳೆಂದರೆ ಇಷ್ಟಪಡುವ ನಾನು ಅದರ ಜೊತೆ ಆಟವಾಡತೊಡಗಿದೆ. ನಂತರ ಆ ಮಗುವನ್ನು ಅವರು ಕರೆದರೂ ಮಗು ಹೋಗಲಿಲ್ಲ.'ಇರಲಿ ಬಿಡಿ ನಿದ್ದೆ ಬಂದಾಗ ನಾನೇ ಕಳುಹಿಸುತ್ತೇನೆ' ಎಂದೆ. ಅದಕ್ಕೆ ಅವರು ಏನು ಉತ್ತರಿಸಲಿಲ್ಲ. ಬದಲಿಗೆ ಒಪ್ಪಿಗೆ ಸೂಚಿಸುವಂತೆ ಸುಮ್ಮನಾದರು. ನಾನು ಆ ಮಗು ಜೊತೆ ಮೇಲಿನ ಸೀಟ್್ನಲ್ಲಿ ಮಲಗಿದೆ. ಆ ಪುಟಾಣಿ ನನ್ನ ಹೊಟ್ಟೆ ಮೇಲೆ ಕೂತು ಆಟವಾಡಿಕೊಳ್ಳುತ್ತಿತ್ತು.ಮಗುವನ್ನು ನೋಡಿದರೆ ಏನೋ ಸಂತೋಷ. ನಾವು ಬಾಲ್ಯದ ಆ ದಿನಗಳನ್ನು ನೆನಪಿಸಿಕೊಂಡು ಆನಂದ ಪಡಬೇಕಷ್ಟೆ. ಆಮೇಲೆ ಓದು, ಕಾಲೇಜ್, ಕೆಲಸ ಹುಡುಕುವ ಕೆಲಸ, ಆಮೇಲೆ ಕೆಲಸ, ಬಾಸ್, ಫೋನ್ ಇತ್ಯಾದಿ.....ಆ ಬಾಲ್ಯ ಮತ್ತೆ ಬರಲ್ಲ. ನೆನಸಿಕೊಂಡರೆ ಬಾಲ್ಯ ಮುಗಿದಿದ್ದು ಗೊತ್ತಾಗಲೇ ಇಲ್ವಲ್ಲ ಅನ್ನಿಸುತ್ತೆ. ಈ ಪುಟಾಣಿಗೆ ಆಫಿಸಿನ ಟೆನ್ಷನ್ ಇಲ್ಲ, ಬಾಸ್್ನ ಫೋನಿನ ಕಾಟ ಇಲ್ಲ, ಟ್ರಾಫಿಕ್ ಸಮಸ್ಯೆ ಇಲ್ಲ, ಹಬ್ಬಕ್ಕೆ ಮನೆಗೆ ಹೋಗಬೇಕು ಅಂತ ಏನಿಲ್ಲ.... ಹೀಗೆ ಎಲ್ಲಾ ಇಲ್ಲಗಳ ಮಧ್ಯೆಯೂ ಕಂದಮ್ಮ ನಗು ನಗುತಾ ಇದೆ.ಮಗುವನ್ನ, ಅದರ ಮುಗ್ಧತೆಯನ್ನ, ಅದರ ಆಟವನ್ನ, ಅದರ ಜೀವನ ಶೈಲಿ ಎಲ್ಲವು ಎಷ್ಟು ಸಲೀಸು. ಇಂಥದ್ದೆ ಬಟ್ಟೆ ಬೇಕು ಅನ್ನುವುದಿಲ್ಲ. ಇದೇ ಸಮಯಕ್ಕೆ ಕೆಲಸ ಮುಗಿಸಬೇಕು ಅನ್ನು ಟೆನ್ಷನ್ ಇಲ್ಲ.ಹೊಟ್ಟೆ ಹಸಿದರೆ ಅತ್ತರೆ ಆಯಿತು, ಅಮ್ಮ ಉಣಿಸುತ್ತಾಳೆ, ಉಡಿಸುತ್ತಾಳೆ. ಅತ್ತರೆ ಸಮಾಧಾನ ಮಾಡುತ್ತಾರೆ. ಆಟ ಆಡಿದರೆ ನೋಡಿ ಸಂತೋಷಿಸುತ್ತಾರೆ. ಎಲ್ಲಾ ಸಂಭ್ರಮ, ಸಡಗರ ಸಂತೋಷ....... ಹೀಗೆ ನನ್ನ ಕಲ್ಪನೆಗಳು ಮುಗ್ಧತೆಯ ಆಳಕ್ಕೀಳಿದವು.ಎಷ್ಟೋ ಗೊತ್ತು ಇದೇ ಧ್ಯಾನದಲ್ಲದ್ದೆನೋ ಗೊತ್ತಿಲ್ಲ. ಆ ಮಗು ತೂಕಡಿಸಿದಾಗಲೇ ನನಗೆ ಎಚ್ಚರ. ಬಿದ್ದು ಬಿಟ್ಟೀತು ಎಂದು ಅಲ್ಲೇ ಪಕ್ಕದಲ್ಲೇ ಮಲಗಿಸಿ, ಕೆಳಗೆ ಇಣುಕಿದೆ.ಅಷ್ಟು ಹೊತ್ತಿಗಾಗಲೇ ಬಸ್ ತುಮಕೂರು ಬಿಟ್ಟಿತ್ತು. ಮುಂದೆ ಎಷ್ಟು ದೂರ ಹೋಗಿತ್ತು ಕತ್ತಲೆಯಲ್ಲಿ ಗೊತ್ತಾಗಲಿಲ್ಲ. ಸರಿ ಕೆಳಗೆ ನೋಡಿದೆ, ಅವರ ಅಮ್ಮ ಅದೇ ಆ ಹೆಂಗಸು ಮಲಗಿತ್ತು.ನಿದ್ದೆ ಬಂದಿರಿಲಿಲ್ಲ ಅನ್ನಿಸುತ್ತೆ. ಕೂಗೋಣವೆಂದರೆ ಹೆಸರು ಗೊತ್ತಿಲ್ಲ. ಎಲ್ಲಾರು ಮಲಗಿರೋ ಟೈಮಲ್ಲಿ ಕೂಗಿದರೆ ಯಾರು ಏನೆಂದುಕೊಳ್ಳುವರೋ ಎಂಬ ಭಯ ಬೇರೆ. ಏನ್ಮಾಡೋದು ಗೊತ್ತಾಗಲಿಲ್ಲ. ಮಗು ಸುಮ್ಮನೆ ಮಲಗಿದೆ. ಪಾಪ ಅದಕ್ಕೆ ಯಾವುದರ ಪರಿವೆಯೂ ಇಲ್ಲ.ನನಗೂ ಸಾಕೆನ್ನಿಸಿತ್ತು. ಮಗು ಎದ್ದರೆ ನೋಡಿದರಾಯಿತು ಈಗ ಏನು ತಂಟೆ ಇಲ್ವಲ್ಲ ಅಂದುಕೊಂಡು ಮಲಗಿದೆ. ಪಾಪ ಮಗು ನನಗೆ ತೊಂದರೆ ಆಗಬಾರದು ಅಂದುಕೊಂಡಿತೋ ಏನೋ ಅನ್ನವಂತೆ ಬೆಳಕು ಹರಿಯುವತನಕ ಸುಮ್ಮನೆ ಮಲಗಿತ್ತು.ನಾವು ಬಯಸದೇ ಇದ್ದರೂ ತೊಂದರೆ ಬಂದೇ ಬರುತ್ತೆ ಅಲ್ವೇ? ಬಂತು. ಕಾರವಾರ ಮತ್ತು ತೊಂದರೆ ಎರಡು ಒಟ್ಟಿಗೆ.ಸಾರ್, ಬನ್ನಿ ಬೇಗ ಬೇಗ ಇಳಿಯಿರಿ ಅಂತ ಅವಸರ ಮಾಡಿದ್ದು ಬಸ್ ಕಂಡಕ್ಟರ್. ಮುಂದೆ ಆ ಬಸ್ ಗೋವಾ ಹೋಗೋದಿತ್ತು. ಸರಿ ನಿದ್ದೆಗಣ್ಣಲ್ಲೇ ಕೆಳಗೆ ಇಳಿದೆ. ಜೊತೆಗೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದೆ. ಪಾಪ ಅವರಿಗೆ ಲಗೇಜ್ ಇತ್ತು.ಬಸ್ ಕೆಳಗಿಳಿದು ಅವರು ಬರೋದನ್ನ ಕಾಯ್ತಾ ಇದ್ದೆ. ಮಗು ಕೊಟ್ಟು ಹೋದರಾಯಿತು ಅಂತ. ಅವರು ಕೆಳಗಿಳಿದು ಬಂದರು. ಬಸ್ ಮೇಲೆ ಹಾಕಿದ್ದ ಏನನ್ನೋ ಜೋರಾಗಿ ಗದ್ದಲ ಮಾಡುತ್ತಾ ಇಳಿಸುತ್ತಿದ್ದರು.ಆಯಮ್ಮ ಕೆಳಗಿಳಿದವಳೇ ತನ್ನ ಪಾಡಿಗೆ ತಾನು ಹೋರಟಳು. ಲಗೇಜ್ ಇಳಿಸುತ್ತಿರುವುದರಿಂದ ಆಕಡೆ ಹೋಗಿ ಮಗು ತೆಗೆದುಕೊಳ್ಳಬಹುದು ಅಂತ ಅವರ ಹಿಂದೆ ಹೋದೆ. ಆದರೆ ಅವರು ತಿರುಗಿ ನೋಡಲೇ ಇಲ್ಲ. ನನಗಾಗಲೇ ಹೊಟ್ಟೆ ಮುರಿಯೋದಕ್ಕೆ ಶುರು.ಮಗುವನ್ನೆತ್ತಿಕೊಂಡು ಹಿಂದೆ ಹೋಗಿ ಮಾತಾಡಿಸಿದೆ. ಆದರೆ ಅವರು ಈ ಮಗು ನಂದಲ್ಲ. ನನಗೇನು ಗೊತ್ತಿಲ್ಲ ಎನ್ನುವ ಅರ್ಥದಲ್ಲಿ ಹೇಳಿದರು. ನನಗೋ ತಲೆ ಕೆಟ್ಟ ಹೋಯ್ತು. ಇದೊಳ್ಳೇ ಫಜೀತಿ ಬಂತಲ್ಲಪಾ ಅನಿಸಿತು.ಅವರದು ಕೊಂಕಣಿ ಭಾಷೆ. ನನಗೆ ಅದು ಅಡ್ಡ ಗೋಡೆ. ಆ ಬಸ್ ಕಂಡಕ್ಟರ್ ಕರೆದು ಅಣ್ಣಾ... ಇವರು ಏನೋ ಹೇಳ್ತಾರೆ ಕೇಳು ನನಗೆ ಅರ್ಥವಾಗುತ್ತಿಲ್ಲ ಎಂದೆ. ಆಯಮ್ಮ ಹೇಳಿದ್ದನ್ನ ಕೇಳಿ ನನಗೇಳಿದ್ದನ್ನ ಕೇಳಿ ದಂಗಾದೆ.ಸುಧಾರಿಸಿಕೊಂಡು ಅಲ್ಲಯ್ಯ... ಇದು ಅವರದೇ ಮಗು, ನಿನಗೂ ಗೊತ್ತು ಹೇಳು ನಂದು ತೀರಾ ಅರ್ಜೆಂಟ್ ಕೆಲಸ ಇದೆ ಹೋಗಬೇಕು ಅಂದೆ. ಅವನು ಏನೋ ಹೇಳಿದ್ದಕ್ಕೆ ಆಯಮ್ಮ ಒಪ್ಪಿದ ಹಾಗೆ ಕಾಣಲಿಲ್ಲ.ಅವನು ಸಾರ್... ಏನೋ ಸಾರ್ ನಾನು ಹೇಳಿದ್ದಾಗಿದೆ ಆ ಮಗು ತನ್ನದಲ್ಲವಂತೆ ಇನ್ನು ನೀವುಂಟು, ಆಯಮ್ಮ ಉಂಟು ನನಗೆ ಲೇಟಾಗುತ್ತೆ ಅಂದವನೇ ರೈಟ್... ರೈಟ್ ಅಂದವನೇ ಬಸ್ ಹತ್ತಿ ಹೊರಟೇ ಬಿಟ್ಟ.ಏನ್ ಮಾಡೋದು ತಿಳಿಲಿಲ್ಲ. ಆಕೆ ಹೊರಟಳು, ನನಗೆ ದಿಕ್ಕು ತಪ್ಪಿದಾಗಯಿತು. ಆ ಕಡೆ ಈ ಕಡೆ ತಿರುಗಿದೆ. ಒಂದು ತೋಚಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಪೊಲೀಸ್ ಕಾನ್್ಸ್ಟೇಬಲ್ ಬರುತ್ತಿದ್ದ. ದೇವರೆ ನನಗಾಗಿ ಪ್ರತ್ಯಕ್ಷ ಆದನೇನೋ ಅನ್ನುವಂತೆ ಅವನ ಹತ್ತಿ
ರ ಓಡಿ, ಇರೋ ವಿಷಯ ತಿಳಿಸಿ ಅಲ್ಲಿಂದ ಕಾಲು ಕೀಳ್ಬೇಕು ಅಂತಿದ್ದೆ.
ಆದರೆ ವಿಷಯ ಕೇಳಿ ಪಾಪ ಆ ಪೊಲೀಸ್್ಗೆ ಏನ್ಮಾಡೋದಕ್ಕೂ ತೋಚಲಿಲ್ಲ ಅನ್ನಿಸುತ್ತೆ. ಅದಕ್ಕೆ ಏ.. ಬನ್ರಿ ಇತ್ಯರ್ಥ ಮಾಡಿಕೊಂಡು ಹೋಗಬೇಕು. ಇಲ್ಲವಾದರೆ ಆ ಮಗು ತಗೊಂಡು ನಾವು ಏನ್ಮಾಡೋದು ಅಂದ ಗೊಣಗುವ ಧ್ವನಿಯಲ್ಲಿ.ಬೇರೆ ದಾರಿನೇ ಇಲ್ಲ. ಆಕೆಗೂ ಏನೋ ಹೇಳಿದ ಕೊಂಕಣಿ ಭಾಷೆಯಲ್ಲಿ. ಅವನ ಹಿಂದೆ ಅವಳು, ಅವಳಿಂದೆ ನಾನು ರೈಲುಗಾಡಿಯಂತೆ ಹೊರಟ್ವಿ.ದಾರಿಯಲ್ಲಿ ಏನೇನೋ ಯೋಚನೆಗಳು. ಮಗು ನನಗೆ ಗಂಟುಬಿತ್ತು ಅಂದ್ರೆ ಏನ್ಮಾಡೋದು? ಸಾಕೋದು ಹೇಗೆ? ಎಲ್ಲಿ? ಎಲ್ಲಾ ಪ್ರಶ್ನೆಗಳು ತಲೆ ಕೆಟ್ಟೋತು. ಬಸ್್ಸ್ಟ್ಯಾಂಡ್ ಮುಂದೆ ಹೋಗಿ ಸರ್ಕ್್ಲ್್ನಿಂದ ಬಲಗಡೆ ತಿರುಗಿದರೆ ಅಲ್ಲೇ ಪೊಲೀಸ್ ಸ್ಟೇಷನ್.
ಮುಸುಗೆಳೆದುಕೊಂಡು ಮಲಗಿದೆ.ತುಮಕೂರಿನ ಹೋಟೆಲ್ ಒಂದರಲ್ಲಿ ಊಟಕ್ಕೆ ನಿಲ್ಲಿಸಿದರು. ಇಳಿದು ತಿಂದುಕೊಂಡು ಬಂದೆ. ಬಸ್ ಹೋರಡಲು ಇನ್ನೂ ಟೈಮ್ ಇತ್ತು. ಪುಸ್ತಕ ತೆಗೆದು ಓದುತಿದ್ದೆ. ಅಷ್ಟರಲ್ಲಿ ಒಂದು ಮಗು ಎತ್ತಿಕೊಂಡು ಒಬ್ಬ ಗೃಹಿಣಿ ಬಂದರು. ಅವರ ಸೀಟ್ ನನ್ನ ಸೀಟ್ ಮೇಲಿತ್ತು.ಅವರ ಬಳಿ ಎರಡು ಬ್ಯಾಗ್ ಲಗೇಜ್ ಇತ್ತು. ಅದಕ್ಕೆ ಅವರಿಗೆ ಮೇಲೆ ಹತ್ತಿ ಮಲಗಲು ಸಾಧ್ಯವಿರಲಿಲ್ಲ. ಹಾಗಾಗಿ ಕಂಡಕ್ಟರ್್ಗೆ ಹೇಳಿದರು ಅನ್ನಿಸುತ್ತೆ, ಕಂಡಕ್ಟರ್ ಬಂದು ನನಗೆ ಕೇಳಿಕೊಂಡಾಗ ನನಗೆ ಇಲ್ಲವೆನ್ನಾಲಾಗಲಿಲ್ಲ.ಆ ಮಗು ತುಂಬಾ ಮುದ್ದಾಗಿತ್ತು. ನಾನು ಅದನ್ನ ಕರೆದೆ, ಅದು ಬಂತು. ಅವರಿಗೆ ಸ್ವಲ್ಪ ಲಗೇಜ್ ಇಡಲು ಅನುಕೂಲವಾಗಲಿ ಅಂತ ಆ ಮಗುವನ್ನ ನಾನೇ ಎತ್ತಿಕೊಂಡು ನನ್ನ ಸೀಟ್ ಮೇಲೆ ಹೋದೆ.ನನ್ನ ಜೇಬ್್ನಿಂದ ಪೆನ್ ತೆಗೆದುಕೊಂಡು ಆಟವಾಡುತ್ತಿತ್ತು. ಮಕ್ಕಳೆಂದರೆ ಇಷ್ಟಪಡುವ ನಾನು ಅದರ ಜೊತೆ ಆಟವಾಡತೊಡಗಿದೆ. ನಂತರ ಆ ಮಗುವನ್ನು ಅವರು ಕರೆದರೂ ಮಗು ಹೋಗಲಿಲ್ಲ.'ಇರಲಿ ಬಿಡಿ ನಿದ್ದೆ ಬಂದಾಗ ನಾನೇ ಕಳುಹಿಸುತ್ತೇನೆ' ಎಂದೆ. ಅದಕ್ಕೆ ಅವರು ಏನು ಉತ್ತರಿಸಲಿಲ್ಲ. ಬದಲಿಗೆ ಒಪ್ಪಿಗೆ ಸೂಚಿಸುವಂತೆ ಸುಮ್ಮನಾದರು. ನಾನು ಆ ಮಗು ಜೊತೆ ಮೇಲಿನ ಸೀಟ್್ನಲ್ಲಿ ಮಲಗಿದೆ. ಆ ಪುಟಾಣಿ ನನ್ನ ಹೊಟ್ಟೆ ಮೇಲೆ ಕೂತು ಆಟವಾಡಿಕೊಳ್ಳುತ್ತಿತ್ತು.ಮಗುವನ್ನು ನೋಡಿದರೆ ಏನೋ ಸಂತೋಷ. ನಾವು ಬಾಲ್ಯದ ಆ ದಿನಗಳನ್ನು ನೆನಪಿಸಿಕೊಂಡು ಆನಂದ ಪಡಬೇಕಷ್ಟೆ. ಆಮೇಲೆ ಓದು, ಕಾಲೇಜ್, ಕೆಲಸ ಹುಡುಕುವ ಕೆಲಸ, ಆಮೇಲೆ ಕೆಲಸ, ಬಾಸ್, ಫೋನ್ ಇತ್ಯಾದಿ.....ಆ ಬಾಲ್ಯ ಮತ್ತೆ ಬರಲ್ಲ. ನೆನಸಿಕೊಂಡರೆ ಬಾಲ್ಯ ಮುಗಿದಿದ್ದು ಗೊತ್ತಾಗಲೇ ಇಲ್ವಲ್ಲ ಅನ್ನಿಸುತ್ತೆ. ಈ ಪುಟಾಣಿಗೆ ಆಫಿಸಿನ ಟೆನ್ಷನ್ ಇಲ್ಲ, ಬಾಸ್್ನ ಫೋನಿನ ಕಾಟ ಇಲ್ಲ, ಟ್ರಾಫಿಕ್ ಸಮಸ್ಯೆ ಇಲ್ಲ, ಹಬ್ಬಕ್ಕೆ ಮನೆಗೆ ಹೋಗಬೇಕು ಅಂತ ಏನಿಲ್ಲ.... ಹೀಗೆ ಎಲ್ಲಾ ಇಲ್ಲಗಳ ಮಧ್ಯೆಯೂ ಕಂದಮ್ಮ ನಗು ನಗುತಾ ಇದೆ.ಮಗುವನ್ನ, ಅದರ ಮುಗ್ಧತೆಯನ್ನ, ಅದರ ಆಟವನ್ನ, ಅದರ ಜೀವನ ಶೈಲಿ ಎಲ್ಲವು ಎಷ್ಟು ಸಲೀಸು. ಇಂಥದ್ದೆ ಬಟ್ಟೆ ಬೇಕು ಅನ್ನುವುದಿಲ್ಲ. ಇದೇ ಸಮಯಕ್ಕೆ ಕೆಲಸ ಮುಗಿಸಬೇಕು ಅನ್ನು ಟೆನ್ಷನ್ ಇಲ್ಲ.ಹೊಟ್ಟೆ ಹಸಿದರೆ ಅತ್ತರೆ ಆಯಿತು, ಅಮ್ಮ ಉಣಿಸುತ್ತಾಳೆ, ಉಡಿಸುತ್ತಾಳೆ. ಅತ್ತರೆ ಸಮಾಧಾನ ಮಾಡುತ್ತಾರೆ. ಆಟ ಆಡಿದರೆ ನೋಡಿ ಸಂತೋಷಿಸುತ್ತಾರೆ. ಎಲ್ಲಾ ಸಂಭ್ರಮ, ಸಡಗರ ಸಂತೋಷ....... ಹೀಗೆ ನನ್ನ ಕಲ್ಪನೆಗಳು ಮುಗ್ಧತೆಯ ಆಳಕ್ಕೀಳಿದವು.ಎಷ್ಟೋ ಗೊತ್ತು ಇದೇ ಧ್ಯಾನದಲ್ಲದ್ದೆನೋ ಗೊತ್ತಿಲ್ಲ. ಆ ಮಗು ತೂಕಡಿಸಿದಾಗಲೇ ನನಗೆ ಎಚ್ಚರ. ಬಿದ್ದು ಬಿಟ್ಟೀತು ಎಂದು ಅಲ್ಲೇ ಪಕ್ಕದಲ್ಲೇ ಮಲಗಿಸಿ, ಕೆಳಗೆ ಇಣುಕಿದೆ.ಅಷ್ಟು ಹೊತ್ತಿಗಾಗಲೇ ಬಸ್ ತುಮಕೂರು ಬಿಟ್ಟಿತ್ತು. ಮುಂದೆ ಎಷ್ಟು ದೂರ ಹೋಗಿತ್ತು ಕತ್ತಲೆಯಲ್ಲಿ ಗೊತ್ತಾಗಲಿಲ್ಲ. ಸರಿ ಕೆಳಗೆ ನೋಡಿದೆ, ಅವರ ಅಮ್ಮ ಅದೇ ಆ ಹೆಂಗಸು ಮಲಗಿತ್ತು.ನಿದ್ದೆ ಬಂದಿರಿಲಿಲ್ಲ ಅನ್ನಿಸುತ್ತೆ. ಕೂಗೋಣವೆಂದರೆ ಹೆಸರು ಗೊತ್ತಿಲ್ಲ. ಎಲ್ಲಾರು ಮಲಗಿರೋ ಟೈಮಲ್ಲಿ ಕೂಗಿದರೆ ಯಾರು ಏನೆಂದುಕೊಳ್ಳುವರೋ ಎಂಬ ಭಯ ಬೇರೆ. ಏನ್ಮಾಡೋದು ಗೊತ್ತಾಗಲಿಲ್ಲ. ಮಗು ಸುಮ್ಮನೆ ಮಲಗಿದೆ. ಪಾಪ ಅದಕ್ಕೆ ಯಾವುದರ ಪರಿವೆಯೂ ಇಲ್ಲ.ನನಗೂ ಸಾಕೆನ್ನಿಸಿತ್ತು. ಮಗು ಎದ್ದರೆ ನೋಡಿದರಾಯಿತು ಈಗ ಏನು ತಂಟೆ ಇಲ್ವಲ್ಲ ಅಂದುಕೊಂಡು ಮಲಗಿದೆ. ಪಾಪ ಮಗು ನನಗೆ ತೊಂದರೆ ಆಗಬಾರದು ಅಂದುಕೊಂಡಿತೋ ಏನೋ ಅನ್ನವಂತೆ ಬೆಳಕು ಹರಿಯುವತನಕ ಸುಮ್ಮನೆ ಮಲಗಿತ್ತು.ನಾವು ಬಯಸದೇ ಇದ್ದರೂ ತೊಂದರೆ ಬಂದೇ ಬರುತ್ತೆ ಅಲ್ವೇ? ಬಂತು. ಕಾರವಾರ ಮತ್ತು ತೊಂದರೆ ಎರಡು ಒಟ್ಟಿಗೆ.ಸಾರ್, ಬನ್ನಿ ಬೇಗ ಬೇಗ ಇಳಿಯಿರಿ ಅಂತ ಅವಸರ ಮಾಡಿದ್ದು ಬಸ್ ಕಂಡಕ್ಟರ್. ಮುಂದೆ ಆ ಬಸ್ ಗೋವಾ ಹೋಗೋದಿತ್ತು. ಸರಿ ನಿದ್ದೆಗಣ್ಣಲ್ಲೇ ಕೆಳಗೆ ಇಳಿದೆ. ಜೊತೆಗೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದೆ. ಪಾಪ ಅವರಿಗೆ ಲಗೇಜ್ ಇತ್ತು.ಬಸ್ ಕೆಳಗಿಳಿದು ಅವರು ಬರೋದನ್ನ ಕಾಯ್ತಾ ಇದ್ದೆ. ಮಗು ಕೊಟ್ಟು ಹೋದರಾಯಿತು ಅಂತ. ಅವರು ಕೆಳಗಿಳಿದು ಬಂದರು. ಬಸ್ ಮೇಲೆ ಹಾಕಿದ್ದ ಏನನ್ನೋ ಜೋರಾಗಿ ಗದ್ದಲ ಮಾಡುತ್ತಾ ಇಳಿಸುತ್ತಿದ್ದರು.ಆಯಮ್ಮ ಕೆಳಗಿಳಿದವಳೇ ತನ್ನ ಪಾಡಿಗೆ ತಾನು ಹೋರಟಳು. ಲಗೇಜ್ ಇಳಿಸುತ್ತಿರುವುದರಿಂದ ಆಕಡೆ ಹೋಗಿ ಮಗು ತೆಗೆದುಕೊಳ್ಳಬಹುದು ಅಂತ ಅವರ ಹಿಂದೆ ಹೋದೆ. ಆದರೆ ಅವರು ತಿರುಗಿ ನೋಡಲೇ ಇಲ್ಲ. ನನಗಾಗಲೇ ಹೊಟ್ಟೆ ಮುರಿಯೋದಕ್ಕೆ ಶುರು.ಮಗುವನ್ನೆತ್ತಿಕೊಂಡು ಹಿಂದೆ ಹೋಗಿ ಮಾತಾಡಿಸಿದೆ. ಆದರೆ ಅವರು ಈ ಮಗು ನಂದಲ್ಲ. ನನಗೇನು ಗೊತ್ತಿಲ್ಲ ಎನ್ನುವ ಅರ್ಥದಲ್ಲಿ ಹೇಳಿದರು. ನನಗೋ ತಲೆ ಕೆಟ್ಟ ಹೋಯ್ತು. ಇದೊಳ್ಳೇ ಫಜೀತಿ ಬಂತಲ್ಲಪಾ ಅನಿಸಿತು.ಅವರದು ಕೊಂಕಣಿ ಭಾಷೆ. ನನಗೆ ಅದು ಅಡ್ಡ ಗೋಡೆ. ಆ ಬಸ್ ಕಂಡಕ್ಟರ್ ಕರೆದು ಅಣ್ಣಾ... ಇವರು ಏನೋ ಹೇಳ್ತಾರೆ ಕೇಳು ನನಗೆ ಅರ್ಥವಾಗುತ್ತಿಲ್ಲ ಎಂದೆ. ಆಯಮ್ಮ ಹೇಳಿದ್ದನ್ನ ಕೇಳಿ ನನಗೇಳಿದ್ದನ್ನ ಕೇಳಿ ದಂಗಾದೆ.ಸುಧಾರಿಸಿಕೊಂಡು ಅಲ್ಲಯ್ಯ... ಇದು ಅವರದೇ ಮಗು, ನಿನಗೂ ಗೊತ್ತು ಹೇಳು ನಂದು ತೀರಾ ಅರ್ಜೆಂಟ್ ಕೆಲಸ ಇದೆ ಹೋಗಬೇಕು ಅಂದೆ. ಅವನು ಏನೋ ಹೇಳಿದ್ದಕ್ಕೆ ಆಯಮ್ಮ ಒಪ್ಪಿದ ಹಾಗೆ ಕಾಣಲಿಲ್ಲ.ಅವನು ಸಾರ್... ಏನೋ ಸಾರ್ ನಾನು ಹೇಳಿದ್ದಾಗಿದೆ ಆ ಮಗು ತನ್ನದಲ್ಲವಂತೆ ಇನ್ನು ನೀವುಂಟು, ಆಯಮ್ಮ ಉಂಟು ನನಗೆ ಲೇಟಾಗುತ್ತೆ ಅಂದವನೇ ರೈಟ್... ರೈಟ್ ಅಂದವನೇ ಬಸ್ ಹತ್ತಿ ಹೊರಟೇ ಬಿಟ್ಟ.ಏನ್ ಮಾಡೋದು ತಿಳಿಲಿಲ್ಲ. ಆಕೆ ಹೊರಟಳು, ನನಗೆ ದಿಕ್ಕು ತಪ್ಪಿದಾಗಯಿತು. ಆ ಕಡೆ ಈ ಕಡೆ ತಿರುಗಿದೆ. ಒಂದು ತೋಚಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಪೊಲೀಸ್ ಕಾನ್್ಸ್ಟೇಬಲ್ ಬರುತ್ತಿದ್ದ. ದೇವರೆ ನನಗಾಗಿ ಪ್ರತ್ಯಕ್ಷ ಆದನೇನೋ ಅನ್ನುವಂತೆ ಅವನ ಹತ್ತಿ
ರ ಓಡಿ, ಇರೋ ವಿಷಯ ತಿಳಿಸಿ ಅಲ್ಲಿಂದ ಕಾಲು ಕೀಳ್ಬೇಕು ಅಂತಿದ್ದೆ.ಆದರೆ ವಿಷಯ ಕೇಳಿ ಪಾಪ ಆ ಪೊಲೀಸ್್ಗೆ ಏನ್ಮಾಡೋದಕ್ಕೂ ತೋಚಲಿಲ್ಲ ಅನ್ನಿಸುತ್ತೆ. ಅದಕ್ಕೆ ಏ.. ಬನ್ರಿ ಇತ್ಯರ್ಥ ಮಾಡಿಕೊಂಡು ಹೋಗಬೇಕು. ಇಲ್ಲವಾದರೆ ಆ ಮಗು ತಗೊಂಡು ನಾವು ಏನ್ಮಾಡೋದು ಅಂದ ಗೊಣಗುವ ಧ್ವನಿಯಲ್ಲಿ.ಬೇರೆ ದಾರಿನೇ ಇಲ್ಲ. ಆಕೆಗೂ ಏನೋ ಹೇಳಿದ ಕೊಂಕಣಿ ಭಾಷೆಯಲ್ಲಿ. ಅವನ ಹಿಂದೆ ಅವಳು, ಅವಳಿಂದೆ ನಾನು ರೈಲುಗಾಡಿಯಂತೆ ಹೊರಟ್ವಿ.ದಾರಿಯಲ್ಲಿ ಏನೇನೋ ಯೋಚನೆಗಳು. ಮಗು ನನಗೆ ಗಂಟುಬಿತ್ತು ಅಂದ್ರೆ ಏನ್ಮಾಡೋದು? ಸಾಕೋದು ಹೇಗೆ? ಎಲ್ಲಿ? ಎಲ್ಲಾ ಪ್ರಶ್ನೆಗಳು ತಲೆ ಕೆಟ್ಟೋತು. ಬಸ್್ಸ್ಟ್ಯಾಂಡ್ ಮುಂದೆ ಹೋಗಿ ಸರ್ಕ್್ಲ್್ನಿಂದ ಬಲಗಡೆ ತಿರುಗಿದರೆ ಅಲ್ಲೇ ಪೊಲೀಸ್ ಸ್ಟೇಷನ್.